Saturday, November 13, 2010

ಜೀವನವೆಂದು ನಾಟಕರಂಗ?

ನಾನೊಂದು ಕನಸ ಕಂಡೆ
ಕನಸಲ್ಲೊಂದು ಕನಸ ಕಂಡೆ
ನಾನು ರಾಜನಾದ ಹಂಗೆ
ಅದರಲ್ಲೊಂದು ಆಸೆ ಕಂಡೆ

ಆದರಲ್ಲೊಂದಿತ್ತು ಅಚ್ಚರಿ
ರಾಜ್ಯದ ರಾಜನಲ್ಲ
ಆಡಿದ್ದೆ ನಾಟಕ ರಂಗವನ್ನೇರಿ
ನನಗ್ಯಾರು ಪ್ರಜೆಯಿರಲಿಲ್ಲ

ನಾಟಕದಲ್ಲಿತ್ತು ಮಾತು
ಜೀವನವು ಒಂದು ನಾಟಕ, ಆದರೆ
ನಾಟಕ ಮಾತ್ರ ಆಗಲಾರದು ಜೀವನ
ಎಂದು ನನಗೆ ಅಷ್ಟರಲ್ಲಿ ಹೊಳೆದಿತ್ತು

ರಾಜನಾದೆ ನಾಯಕನಾದೆ
ಘರ್ಜಿಸಿ ಹುಲಿಯಾದೆ,ಓಡುವ ಚಿರತೆಯಾದೆ
ಮನಃಪೂರ್ತಿ ಅತ್ತು ನಕ್ಕೆ
ಕೆಳಗಿಳಿದ ಮೇಲೆ ಸಾಮಾನ್ಯನಾದೆ

ನಾನೊಂದು ಕನಸ ಕಂಡೆ
ಕನಸಲೊಂದು ಕನಸ ಕಂಡೆ
ಜೀವನವೂ ಇಂತಹ ಕನಸಾಗ
ಬಾರದೆ ಎಂದು ನೊಂದೆ

2 comments:

Ranji David said...

Sriharhas

swami, english-ali write maddidere thumba suluba ... swalpa adjust maadi

ranji

Harsha said...

Sure Ranji...tough to translate a Poem :-) but will certainly try...